ವಿಜಯಾ ಬ್ಯಾಂಕ್ ಮಂಗಳೂರಿನಲ್ಲಿ ಸ್ಥಾಪನೆಯಾದ ಹಲವಾರು ಬ್ಯಾಂಕುಗಳಲ್ಲಿ ಒಂದು. == ಚರಿತ್ರೆ == ಇದನ್ನು ಅತ್ತಾವರ ಬಾಲಕೃಷ್ಣ ಶೆಟ್ಟಿ ಅಕ್ಟೋಬರ್ ೨೩,೧೯೩೧ ರಂದು ಸ್ಥಾಪಿಸಿದರು.ಇದನ್ನು ವಿಜಯದಶಮಿಯ ದಿನ ಸ್ಥಾಪನೆ ಮಾಡಿದುದರಿಂದ ಇದಕ್ಕೆ ವಿಜಯಾ ಬ್ಯಾಂಕ್ ಎಂದು ಹೆಸರಾಯಿತು. ಇದನ್ನು ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ರೈತರಲ್ಲಿ ಬ್ಯಾಂಕಿಂಗ್ ಹವ್ಯಾಸ,ಉದ್ಯಮಶೀಲತೆ ಬೆಳಸಲು ಮತ್ತು ಅವರ ಆವಶ್ಯಕತೆಗಳಿಗೆ ಸುಲಭ ಹಣಕಾಸಿನ ಒದಗಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸ್ಥಾಪನೆ ಮಾಡಲಾಯಿತು.೧೯೫೮ರಲ್ಲಿ ಇದು ಶೆಡ್ಯೂಲ್ಡ್ ಬ್ಯಾಂಕ್ ಆಗಿ ಪರಿವರ್ತನೆಯಾದರೆ,ಎಪ್ರಿಲ್ ೧೫,೧೯೮೦ರಂದು ರಾಷ್ಟ್ರೀಕರಣಗೊಂಡಿತು.೧೯೬೦-೧೯೬ರ ಅವಧಿಯಲ್ಲಿ ಇದು ಒಂಬತ್ತು ಸಣ್ಣ ಬ್ಯಾಂಕ್‍ಗಳನ್ನು ತನ್ನೊಳಗೆ ವಿಲೀನ ಮಾಡಿಕೊಂಡು ಅಖಿಲ ಭಾರತ ಮಟ್ಟದ ಬ್ಯಾಂಕಾಗಿ ಬೆಳೆಯಿತು. ಇದರ ಹಿಂದಿನ ಚಾಲಕಶಕ್ತಿಯಾಗಿದ್ದವರು ಅಂದಿನ ಅಧ್ಯಕ್ಷರಾದ ಮುಲ್ಕಿ ಸುಂದರರಾಮ ಶೆಟ್ಟಿಯವರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==